ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‍ಸ್ಟಿಟ್ಯೂಟ್ -
ವ್ಯವಸಾಯಿಕ ಸಂಶೋಧನೆಗಾಗಿ 1905ರಲ್ಲಿ ಸ್ಥಾಪಿತವಾದ ಸಂಸ್ಥೆ. ಇದರ ಕಾರ್ಯಾಲಯ ಮೊದಲು ಬಿಹಾರದ ಪೂಸಾದಲ್ಲಿತ್ತು. ವಿಶ್ವವಿದ್ಯಾನಿಲಯದ ಅಂತಸ್ತು ದೊರಕಿಸಿಕೊಂಡಿರುವ ಈ ಸಂಸ್ಥೆಯ ಈಗಿನ ಕಾರ್ಯಸ್ಥಾನ ದೆಹಲಿ. ಇದು ಈಗ ಮೂಲಭೂತ (ಫಂಡಮೆಂಟಲ್) ಹಾಗೂ ಪ್ರಯುಕ್ತ (ಅಪ್ಲೈಡ್) ಸಂಶೋಧನೆಯಲ್ಲೂ ಸ್ನಾತಕೋತ್ತರ ಶಿಕ್ಷಣ ನೀಡುವ ಕಾರ್ಯದಲ್ಲೂ ನಿರತವಾಗಿದೆ.											  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ